ವಿಟ ಬಂದಾನೆಂದು ನಟನೆಗಾರ್ತಿ
ತಾ ವಿಟಸಂಪನ್ನೆಯಾದಳವ್ವಾ.
ವಿಟ ಬಾರದಿದ್ದಡೆ,
ತಾ ಸಿಡಿಮಿಡಿ [ಗೊಂಡ]ಬ್ಬರ ನೋಡವ್ವಾ,
ಇದರ ತೋಟಿಯ ಕಳೆಯಬಂದಡೆ
ನಿನ್ನ ತೋಟಿ ಕೆಟ್ಟಿತ್ತೆಲಗವ್ವಾ,
ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಜಾರನಲ್ಲಿ.
Transliteration Viṭa bandanendu naṭanegārti
tā viṭasampanneyādaḷavvā.
Viṭa bāradiddaḍe,
tā siḍimiḍi [goṇḍa]bbara nōḍavvā,
idara tōṭiya kaḷeyabandaḍe
ninna tōṭi keṭṭittelagavvā,
kapilasid'dhamallikārjunanemba jāranalli.