ವಚನ - 1553     
 
ಭೂಪಾಲನ ಕುದುರೆಯ ಗೋಪಾಲನೇರಿದಡೆ, ಮನ್ನಣೆಯಲ್ಲದೆ ಅಮನ್ನಣೆಯೇನಯ್ಯಾ? ಗೋಪಾಲನ ಕುದುರೆಯ ಭೂಪಾಲನೇರಿದಡೆ, ಅಮನ್ನಣೆಯಲ್ಲದೆ ಮನ್ನಣೆಯೇನಯ್ಯಾ? ಭೂಪನ ವೇಷ ಗೋಪಂಗಾದುದು, ಗೋಪನ ವೇಷ ಭೂಪಂಗಾದುದು ಪಾಪದ ಕೇಡು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.