•  
  •  
  •  
  •  
Index   ವಚನ - 1558    Search  
 
ದೇಹದ ಗುಣ ಇರುವಂದಿಗೆ ತಪ್ಪದು ನೋಡಾ ಎಂಬಲ್ಲಿ ಕ್ಷುಧೆ ತೃಷೆಗಳಿಗಲ್ಲದೆ ದುರ್ಗುಣಕ್ಕುಂಟೇನೋ ಅಯ್ಯಾ? ಕ್ಷುಧೆ ತೃಷೆ ಇಲ್ಲದಿರೆ ದೇಹ ಬೀಹವಾಗುವುದು. ದುರ್ಗುಣವಿಲ್ಲದಡೆ ಬೀಹವಾಗದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Dēhada guṇa iruvandige tappadu nōḍā emballi kṣudhe tr̥ṣegaḷigallade durguṇakkuṇṭēnō ayyā? Kṣudhe tr̥ṣe illadire dēha bīhavāguvudu. Durguṇavilladaḍe bīhavāgadu nōḍā, kapilasid'dhamallikārjunā.