ವಚನ - 1564     
 
ಹುಟ್ಟಿದ ಕಲ್ಲು ಲಿಂಗವಾಯಿತ್ತು; ಹುಟ್ಟಿದ ಕಲ್ಲು ದೇವಾಲಯವಾಯಿತ್ತು; ಹುಟ್ಟಿದ ಪಶು ಹೊಲಕ್ಕೆ ಬಂದಿತ್ತು; ಹುಟ್ಟಿದ ಮರ ಕಟ್ಟಳೆಯಾದವು. ಹುಟ್ಟಿ ಕೀರ್ತಿಯ ಮೆಟ್ಟದವ ಇಟ್ಟ ಇಟ್ಟ ಹುಳಿಯನ್ನದಂತೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.