•  
  •  
  •  
  •  
Index   ವಚನ - 1581    Search  
 
ಒಂದೆ ವಸ್ತು ಅವಸ್ಥಾತ್ರಯ ಕಿಂಚಿಜ್ಞತ್ವ ಹೊಂದಿ ಜೀವನೆನಿಸಿತ್ತಯ್ಯಾ, ಆ ಜೀವ ಕರ್ತೃತ್ವಭೋಕ್ತೃತ್ವಕ್ಕೆ ಒಳಗಾಗಿ `ದೇಹ ನಾನು' ಎಂದಿತ್ತಯ್ಯಾ. `ದೇಹ ನಾನು' ಎಂಬುವ ವಾಸನೆಯೊಳಗಾಗಿ, ಕಾಲತ್ರಯಕ್ಕೊಳಗಾಗಿ, ಅಸ್ವತಂತ್ರನಾಗಿ ನೆಲಸಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ondē vastu avasthātraya kin̄cijñatva hondi jīvanenisittayyā, ā jīva kartr̥tvabhōktr̥tvakke oḷagāgi `dēha nānu' endittayyā. `Dēha nānu' embuva vāsanegāgi, kālatrayakkoḷagāgi, asvatantranāgi nelasittu nōḍā, kapilasid'dhamallikārjunā.