ಪುರಾಣವ ಹೇಳಿದವರೆಲ್ಲ ಪುರಾಣಿಕರು ನೋಡಾ.
ಭವಭವದ ಶಾಸ್ತ್ರವ ಹೇಳಿದವರೆಲ್ಲ ಶಾಸ್ತ್ರಿಗಳು ನೋಡಾ.
ವೇದಾಂತವ ಹೇಳಿದವರೆಲ್ಲ ವೇದಾಂತಿಗಳು
ನೋಡಾ ಭವಭವದಲ್ಲಿ.
ಆದ್ಯರ ವಚನವ ಹೇಳಿದವರೆಲ್ಲ ಪುರಾತರು
ನೋಡಾ ಭವಭವದಲ್ಲಿ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Purāṇava hēḷidavarella purāṇikaru nōḍā.
Bhavabhavada śāstrava hēḷidavarella śāstrigaḷu nōḍā.
Vēdāntava hēḷidavarella vēdāntigaḷu
nōḍā bhavabhavadalli.
Ādyara vacanava hēḷidavarella purātaru
nōḍā bhavabhavadalli,
kapilasid'dhamallikārjunā.