ವಚನ - 1628     
 
ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನವೆಂಬ ಪಂಚಕರಣಂಗಳಿರವ ಹೇಳಿಹೆ ಕೇಳಿರಯ್ಯಾ. ಮನವೆಂಬುದು ಸಂಕಲ್ಪ ವಿಕಲ್ಪಕ್ಕೊಳಗಾಯಿತ್ತು. ಇಲ್ಲದುದ ಕಲ್ಪಿಸುವುದೆ ಸಂಕಲ್ಪ. ಇದ್ದುದನರಿಯದುದೆ ವಿಕಲ್ಪ. ಕಲ್ಪಿಸಿ ರಚಿಸುವುದೆ ಬುದ್ಧಿಯಯ್ಯಾ. ಕಲ್ಪಿಸಿ ಮಾಡುವುದದು ಚಿತ್ತವಯ್ಯಾ. ಮಾಡಿದುದಕ್ಕೆ ನಾನೆಂಬುದು ಅಹಂಕಾರವಯ್ಯಾ. ಮಾಡುವ ನೀಡುವ ಭಾವ ಶಿವಕೃತ್ಯವೆಂದಡೆ ಜ್ಞಾನ ವೈರಾಗ್ಯವಯ್ಯಾ. ಅರಿಯದ ಅರಿವು ಮಹಾಜ್ಞಾನ, ಮೋಕ್ಷದ ಇರವು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.