ಕಾಮಿಯ ಕಾಮಿನಿಯ ನೋಡಿದಳೆಂಬಂತೆ,
ಉಪಾಧಿಯ ನಿರುಪಾಧಿಲಿಂಗದ
ಕೃಪೆಯಾಯಿತ್ತೆಂಬಂತೆ ನುಡಿವರಯ್ಯಾ.
ಕಾಮಿನಿಯ ದೃಷ್ಟಿ ಕಾಮಿಯಲ್ಲಿರಲು
ಕಾಮಿಯೆ ಅಯ್ಯಾ?
ಲಿಂಗದ ದೃಷ್ಟಿ ಅಂಗಗುಣದವನಲ್ಲಿರಲು
ಆತ ಲಿಂಗಗುಣಿಯೆ?
ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kāmiya kāminiya nōḍidaḷembante,
upādhiya nirupādhiliṅgada
kr̥peyāyittembante nuḍivarayyā.
Kāminiya dr̥ṣṭi kāmiyalliralu
kāmiye ayyā?
Liṅgada dr̥ṣṭi aṅgaguṇadavanalliralu
āta liṅgaguṇiye?
Hēḷā, kapilasid'dhamallikārjunā.