ಘಟವ ಮಾಡಿದವ ಘಟದಲ್ಲಿರದಂತೆ,
ಭೂಷಣವ ಮಾಡಿದವ ಭೂಷಣದಲ್ಲಿರದಂತೆ,
ಕೃಷಿಯ ಮಾಡಿದವ ಕೃಷಿಯಲ್ಲಿರದಂತೆ,
ತೈಲವ ತೆಗೆದವ ತೈಲದಲ್ಲಿರದಂತೆ,
ಮನೆಯ ಕಟ್ಟಿದವ ಮನೆಯಲ್ಲಿರದಂತೆ,
ಪಿಂಡವ ಮಾಡಿದವ ಪಿಂಡದೊಳಿರದಂತೆ,
ಬ್ರಹ್ಮಾಂಡವ ರಚಿಸಿದವ ಬ್ರಹ್ಮಾಂಡದೊಳಿರದಂತೆ,
ಅರಿಯದ ಮನುಜರ ಅರುಹಿನ ಮನೆಯೊಳಿಪ್ಪ ನೋಡಾ,
ಕಪಿಲಸಿದ್ಧಮಲ್ಲೇಂದ್ರನೆಲೆ ಮಲ್ಲಶೆಟ್ಟಿ.
Transliteration Ghaṭava māḍidava ghaṭadalliradante,
bhūṣaṇava māḍidava bhūṣaṇadalliradante,
kr̥ṣi māḍidava kr̥ṣiyalliradante,
tailava tegedava tailadalliradante,
maneya kaṭṭidava maneyalliradante,
piṇḍava māḍidava piṇḍadoḷiradante,
brahmāṇḍava racisidava brahmāṇḍadoḷiradante,
ariyada manujara aruhina maneyoḷippa nōḍā,
kapilasid'dhamallēndranele mallaśeṭṭi.