ವಚನ - 1639     
 
ಜಲದಲ್ಲಿಪ್ಪ ಜಲವ ನೋಡಾ; ಮನೆಯಲ್ಲಿಪ್ಪ ಮನೆಯ ನೋಡಾ; ಅಹಂಕಾರದಲ್ಲಿಪ್ಪ ಅಹಂಕಾರವ ನೋಡಾ. ಇವೆಲ್ಲ ಬಯಲಲ್ಲಿ ನಿಂದಡೆ ತೋರ್ಪವು. ಬಯಲಲ್ಲಿ ನಿಂದು ಬಯಲ ಬಯಲ ಮಹಾಬೆಳಗಿನ ಬೆಳಗ ನೋಡಬಲ್ಲಡೆ ಶರಣ, ಕಪಿಲಸಿದ್ಧಮಲ್ಲಿಕಾರ್ಜುನಾ.