ವಚನ - 1656     
 
ಕ್ರಿಯಾ ಜ್ಞಾನ ಎಂಬುದಕ್ಕೆ ಭೇದ ತಿಲಾಂಶವಿಲ್ಲ, ನೋಡಾ. `ದ್ವಂದ್ವೇನ ಭೇದಃ' ಎಂಬ ಅಥರ್ವಣಶಾಖೆಯದು ಸಟೆಯೆ? ಸೂಕ್ಷ್ಮೇಂದ್ರಿಯ ನಿಗ್ರಹದಲ್ಲಿ ಜ್ಞಾನವೆನಿಸಿತ್ತು. ``ಜ್ಞಾನಂ ವಿನಾ ಕ್ರಿಯಾ ನೋ ಭಾತಿ, ಕ್ರಿಯಾಂ ವಿನಾ ನೋ ಭಾತಿ, ತತ್" ಎಲೈ ಕಪಿಲಸಿದ್ಧಮಲ್ಲಿಕಾರ್ಜುನಾ.