ವಚನ - 1658     
 
ಶರಣಸತಿ ಲಿಂಗಪತಿ ಎಂದ ಬಳಿಕ ಲಿಂಗದ ರಾಣಿವಾಸ ನೋಡಾ ಅವರು. ಎಮ್ಮಕ್ಕ ಮಹಾದೇವಿ, ಎಮ್ಮಕ್ಕ ಗಂಗಾದೇವಿ, ಹಿರಿಯಕ್ಕ ಚಿಕ್ಕಕ್ಕ ಎಂದಡೆ ವಿರೋಧ. ವಿರೋಧಿಸಿದಡೇನು? ನಾನು ಚಿಕ್ಕಾಕೆ ಕಪಿಲಸಿದ್ಧಮಲ್ಲಿಕಾರ್ಜುನಂಗೆ.