ವಚನ - 1661     
 
ಜಡಕ್ಕೆ ಜಡವ ಕಟ್ಟಿ ಅಜಡನಾದೆನೆಂಬ ಜಡ ನಾನಲ್ಲವೆ ದೇವಾ? ಜಡಪೂಜೆ ಸಂಪದಾದಿ ಜಾಡ್ಯಕ್ಕೆ ಒಳಗು ಅಲ್ಲವೆ ದೇವಾ? ಅಜಡಪೂಜೆ ಮೋಕ್ಷಕ್ಕೆ ಒಳಗು ಅಲ್ಲವೆ ದೇವಾ? ಜಡ ಅಜಡವೆಂದೆನಿಸದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನದೇವಾ.