ವಚನ - 1673     
 
ತಿಳಿದು ನುಡಿ ಕೊಡಬೇಕಲ್ಲದೆ, ತಿಳಿಯದ ನುಡಿಯದು ಅಪಭ್ರಂಶವಯ್ಯಾ. [ತಿಳಿ] ನುಡಿ ಎರಡೊಂದಾದಡೆ, ಮೃಡಮೂರ್ತಿ ಕಪಿಲಸಿದ್ಧಮಲ್ಲಿಕಾರ್ಜುನ ನುಡಿಗೊಮ್ಮೆ ನುಡಿವ ನೋಡಾ, ಬೊಮ್ಮಣ್ಣಾ.