ಬೋಧವೆಂದಡೆ,
ಕರ್ಣವನೂದಿ ಮಂತ್ರವ ಹೇಳಿದುದು
ಭೋಧವೆ? ಅಲ್ಲಲ್ಲ!
ಬೋಧವೆಂದಡೆ,
ತನುತ್ರಯಸಾಕ್ಷಿ ನೀನೆ ಪರವಸ್ತು
ಎಂಬುದೆ ನಿಜಬೋಧ
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Bōdhavendaḍe,
karṇavanūdi mantrava hēḷidaru
bhōdhave? Allalla!
Bōdhavendaḍe,
tanutrayasākṣi nīne paravastu
embude nijabōdha
nōḍā, kapilasid'dhamallikārjunā.