Index   ವಚನ - 1681    Search  
 
ಪೂಜಾಫಲವಂತಿಂತಲ್ಲ ; `ಪೂಜಾಫಲಂ ಫಲಂ ಮನ್ಯೇ ತವ ಪಾಣಿಗ್ರಹಂ ಶಿವೇ' ಪೂಜಾಫಲವಂತಿಂತಲ್ಲ ; `ಪೂಜಾಫಲಂ ಫಲಂ ಮನ್ಯೇ ಮದ್ಧ್ಯಾನಾಸಕ್ತಪೂರುಷಃ' ಎಂದು ನೀ ಹೇಳಿದ ವಾಕ್ಯ ಹುಸಿಯೇನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ?