ವಚನ - 1683     
 
ಭವಿಯೆಂದಡೆ ಲಿಂಗವಿಲ್ಲದವ ಭವಿಯೇ? ಅಲ್ಲಲ್ಲ. ಭವಿಯೆಂದಡೆ ವೇದವೇದಾಂತರವನೋದಿ, ಲಿಂಗವ ಧರಿಸದವ ಭವಿಯೆ? ಅಲ್ಲಲ್ಲ. ಅಂಗದ ಸ್ಥಿತಿಯನರಿದಡೇನಾಯಿತ್ತು? ಗುಣ ತಿಳಿದು ಲಿಂಗವ ಕೊಡುವ ಗುರುವಿಲ್ಲ. ಬಹಿರಂಗದಲ್ಲಿ ಲಿಂಗವಿರಹಿತ, ಅಂತರಂಗದಲ್ಲಿ ಲಿಂಗಲೋಲುಪ್ತ. ಹೊಲಬುಳ್ಳವನಾದಡೇನು, ತಿಳಿಯದವರಿಲ್ಲದನ್ನಕ್ಕ? ಸತ್ಕ್ರಿಯಾಸಾಮರಸ್ಯಕ್ಕೆ ಭವಿಯಲ್ಲದೆ ಅನುಭವಗೋಷ್ಠಿಗೆ ಭವಿಯೆ? ಅಲ್ಲಲ್ಲ. ಭವಿಯೆಂದಡೆ ಮದ್ಯಪಾನ ಮಾಂಸಭಕ್ಷಣ ಪರಸ್ತ್ರೀಸಂಗ ಪರಧನಚೋರತ್ವ ನಿಜವಸ್ತು ಅಂತರತ್ವವಿದ್ದವನೆ ಭವಿಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.