ಶರಣ ಎಂಬ ಶಬ್ದವಂತಿಂತಲ್ಲ.
[ನೋಣಃ] ಎಂಬ ಸೂತ್ರದಿಂದ ಶರಣನೆನಿಸಿದನು.
ಶರ ಎಂದರೆ ಬಾಣ, ನ ಎಂದಡೆ
ಅಂಥ ಮನ್ಮಥಬಾಣವಿಲ್ಲದವ.
[ಅವ] ನೇ ಶರಣ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Śaraṇa emba śabdavantilla.
[Nōṇaḥ] emba sūtradinda śaraṇanenisidanu.
Śara endare bāṇa, na endaḍe
antha manmathabāṇavilladava.
[Ava] nē śaraṇa nōḍā,
kapilasid'dhamallikārjunā.