ಷಟ್‍ಸ್ಥಲವೆಂಬ ಷಣ್ಮುಖಮುದ್ರೆಯೊಳು,
ನವವಿಧಭಕ್ತಿ ಎಂಬ ನವನಾದ
ಕೇಳದವ ಶರಣನೆ ಅಯ್ಯಾ?
ಷಟ್‍ಸ್ಥಲವೆಂಬ ಷಣ್ಮುಖಮುದ್ರೆಯೊಳು,
ಷಡಕ್ಷರವೆಂಬ ಮಂತ್ರವ ಜಪಿಸಿ,
ಷಡ್ವಿಧಲಿಂಗವ ಪೂಜಿಸದವ ಶರಣನೆ ಅಯ್ಯಾ?
ಷಟ್‍ಸ್ಥಲವೆಂಬ ಷಣ್ಮುಖಮುದ್ರೆಯೊಳು,
ಬೀಜಾಕ್ಷರತ್ರಯಂಗಳನೋದಿ ಷಡಕ್ಷರಂಗಳ ಸಾಧಿಸಿ,
ಷಣ್ಮುಖಶಿವನಾಗದವ ನಿಮ್ಮ ಶರಣನೆ ಅಯ್ಯಾ?
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ṣaṭsthalavemba ṣaṇmukhamudreyoḷu,
navavidhabhakti emba navanāda
kēḷidava śaraṇane ayyā?
Ṣaṭsthalavemba ṣaṇmukhamudreyoḷu,
ṣaḍakṣaravemba mantrava japisi,
ṣaḍvidhaliṅgava pūjisadava śaraṇane ayyā?
Ṣaṭsthalavemba ṣaṇmukhamudreyoḷu,
bījākṣaratrayaṅgaḷanōdi ṣaḍakṣaraṅgaḷa sādhisi,
ṣaṇmukhaśivanāgadava nim'ma śaraṇane ayyā?
Ele kapilasid'dhamallikārjunā.