ವಚನ - 1704     
 
ಯದ್ದೃಷ್ಠಂ ತನ್ನಷ್ಟಂ ಎಂಬ ಶ್ರುತಿವಾಕ್ಯವ[ನ)ನರ್ಥವ ಮಾಡಿ ಮುಳುಗದಿರಾ, ಮನವೆ. ಭೇದಬುದ್ಧಿಯಿಂದರಿವುದದೆ ನಷ್ಟ ನೋಡಾ, ಮನವೆ. ಭೇದವಳಿದು ಭವವಿರಹಿತಮೂರ್ತಿಯ ಪಂಚತತ್ವವೆಂದು ನಂಬು ಕಂಡಾ, ಮನವೆ. `ಸರ್ವಂ ಕಪಿಲಸಿದ್ಧಮಲ್ಲಿಕಾರ್ಜುನಮಯಂ ಜಗತ್' ಎಂಬುದು ಪುಸಿಯೆ ಮನವೆ?