•  
  •  
  •  
  •  
Index   ವಚನ - 1715    Search  
 
ಜಂಗಮವಾಗಿ ಫಲವೇನು, ನೋಡಿ ಮನದೆರೆದು ಮಾತನಾಡಿಸಿ ಜನಜನನವಿಪಿನದಾವಾನಲವಾಗದನ್ನಕ್ಕ? ಜಂಗಮವಾಗಿ ಫಲವೇನು ಭಕ್ತ ತನುತಾಪತ್ರಯವ ನೋಡಿ ಮನದೆರೆದು ಮಾತನಾಡಿಸಿ ಮರುಗದನ್ನಕ್ಕ? ಜಂಗಮವಾಗಿ ಫಲವೇನು, ಭಕ್ತ ವಾಂಛಿತಾರ್ಥಂಗಳನರಿದು, ಪೂಜಾಮುಖದಿಂ ಭೂತಿಯ ಕೊಟ್ಟು, ಆತನ ಪ್ರಪಂಚ ಸಂಭ್ರಮವ ನೋಡದನ್ನಕ್ಕ? ಜಂಗಮವಾಗಿ ಫಲವೇನು, ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿ, ಸುಭಕ್ತರ ಹಸ್ತದಲ್ಲಿ ಕೊಟ್ಟು ಮೋಹ ಮಾಡದನ್ನಕ್ಕ?
Transliteration Jaṅgamavāgi phalavēnu, nōḍi manaderedu mātanāḍisi janajananavipinadāvanalavāgadannakka? Jaṅgamavāgi phalavēnu bhakta tanutāpatrayava nōḍi manaderedu mātanāḍi marugadannakka? Jaṅgamavāgi phalavēnu, bhakta vāṁ chitārthaṅgaḷanaridu, pūjāmukhadiṁ bhūtiya koṭṭu, ātana prapan̄ca sambhramava nōḍadannakka? Jaṅgamavāgi phalavēnu, nam'ma kapilasid'dhamallikārjuna kūḍi, subhaktara hastadalli koṭṭu mōha māḍadannakka?