ಕರ್ಮತ್ರಯಂಗಳ ಭೋಗಿಸಿದಲ್ಲದೆ ಬಿಡದು ಎಂಬ ಶ್ರುತಿಗೇಳಿ
ಮನದೆರೆದು ಮಾತಾಡನಯ್ಯಾ.
ದುಃಖದಿಂ ಭೋಗಿಸಿದ ಕರ್ಮತ್ರಯದೊಳಗಯ್ಯಾ.
ಆದ ಭೋಗ ಸುಖವಾದಡೆ ಮುಂದೆ ಭವಕ್ಕೆ ಈಡಯ್ಯಾ.
ಸುಖದುಃಖಗಳ ಸಮಾನಗೊಂಡವಂಗೆ
ವಿಧಿತ್ರಯಂಗಳಿನ್ನೆಲ್ಲಿಹವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Karmatrayaṅgaḷa bhōgisidallade biḍadu' emba śrutigēḷi
manaderedu mātāḍanayyā.
Meccadiṁ bhōgisida karmatrayadoḷagayya.
Āda bhōga sukhavādaḍe munde bhāvakke īḍayyā.
Sukhaduḥkhagaḷa samānagoṇḍavaṅge
vidhitrayaṅgaḷinnellihavayyā,
kapilasid'dhamallikārjunā.