•  
  •  
  •  
  •  
Index   ವಚನ - 1736    Search  
 
ಕ್ಷೀರ ಶರಧಿಯೊಳಿರುವ ಹಂಸೆಗೆ, ಅನ್ಯ ಕ್ಷೀರದ ಹಂಗುಂಟೇನಯ್ಯಾ? ಸುಗಂಧಮಯ ಪುಷ್ಪದಲ್ಲಿರುವ ಭೃಂಗಂಗೆ ಅನ್ಯ ಪರಿಮಳದ ಹಂಗುಂಟೇನಯ್ಯಾ? ಸಮುದ್ರದೊಳಿರುವ ಮಂಡೂಕಂಗೆ ಅನ್ಯ ಅಂಬುವಿನ ಹಂಗುಂಟೇನಯ್ಯಾ? ಮೊಲೆಯನುಣ್ಣುವ ಶಿಶುವಿಂಗೆ ಅನ್ಯ ಕ್ಷೀರ ನೀರಿನ ಹಂಗುಂಟೇನಯ್ಯಾ? ಸಕಲಪ್ರದಾಯಕ ಲಿಂಗದೊಳಿದ್ದ ಶರಣಂಗೆ ಅನ್ಯ ಪದದಾಶೆಯ ಹಂಗುಂಟೇ? ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kṣīra śaradhiyoḷiruva hansege, an'ya kṣīrada haṅguṇṭēnayyā? Sugandhamaya puṣpadalliruva bhr̥ṅgaṅge an'ya parimaḷada haṅguṇṭēnayyā? Samudradoḷiruva maṇḍūkaṅge an'ya ambuvina haṅguṇṭēnayyā? Moleyanuṇṇuva śiśuviṅge an'ya kṣīra nīrina haṅguṇṭēnayyā? Sakalapradāyaka liṅgadoḷidda śaraṇaṅge an'ya padadāśeya haṅguṇṭē? Hēḷā, kapilasid'dhamallikārjunā.