Index   ವಚನ - 1740    Search  
 
ಒಂದೇ ವಸ್ತು, ತನ್ನ ವಿಚಿತ್ರಮಹಿಮೆಯ ಕೇಳುವಲ್ಲಿ ಕರ್ಣವಾಗಿ, ಸ್ಪರ್ಶಿಸುವಲ್ಲಿ ತ್ವಕ್ಕಾಗಿ, ನೋಡುವಲ್ಲಿ ನೇತ್ರವಾಗಿ, ರುಚಿಸುವಲ್ಲಿ ರಸನೆಯಾಗಿ, ಪರಿಮ[ಳವ ಘ್ರಾಣಿ]ಸುವಲ್ಲಿ ಘ್ರಾಣವಾಗಿ, ನಿಂದೆ ನೀ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.