ವಚನ - 1752     
 
ಪೂಜಾಫಲದಿಂದ ಅರ್ಜುನ ಬಾಣಂಗಳೆಲ್ಲ ಅರಳ್ಗಳಾದುವಯ್ಯಾ ನಿನ್ನಂಗಕ್ಕೆ. ಪೂಜಾಫಲದಿಂದ ಕನ್ನಯ್ಯನ ಮಾಂಸವೆಲ್ಲ ಪರಮ ಷಡ್ರುಚಿಯಾಯಿತ್ತಯ್ಯಾ, ನಿನ್ನ ರಸನೆಗೆ. ಪೂಜಾಫಲದಿಂದ ಚೋಳಿಯ ರತಿ ಪರಮಲೀಲಾನಂದವಾಯಿತ್ತಯ್ಯಾ, ದೃಷ್ಟಿಗೆ. ಪೂಜಾಫಲದಿಂದ ಅಮ್ಮನವರ ಅಪಶಬ್ದಗಳೆಲ್ಲ ಸಾಮಗಾನವ ತಿರಸ್ಕರಿಸಿದುವಯ್ಯಾ ನಿನ್ನ ಶ್ರೋತ್ರಕ್ಕೆ. ಪೂಜಾಫಲದಿಂದಂದು ಚಂದ್ರಚೂಡಿಯ ಕೈಯ ಮದುಗುಣಿಯ ಪುಷ್ಪ ಗಂಧಮಯವಾಗಿ ಮಸ್ತಕಕ್ಕಲಂಕಾರವಾಯಿತ್ತಯ್ಯಾ. ಪೂಜಾಫಲ ಅಂತಿಂತಲ್ಲ, ಪೂಜಾಫಲ ಸ್ವಾದೀನವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.