Index   ವಚನ - 1777    Search  
 
ಆಕಾಶದಲ್ಲಿಯ ಮೇಘದಂತೆ, ಜಲದಲ್ಲಿಯ ತೆರೆಯಂತೆ ಬರುತ್ತಿದೆ ನೋಡಾ ಈ ಘಟ. ಬಂದುದರಿಯೆ, ಹೋದುದರಿಯೆ. ನಿಂದ ವಸ್ತುವದು ನಿಜವೆಂದರಿದೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.