ತಾ ಶಿವಭಕ್ತನಾಗಿ ತನ್ನ ಬಂಧುಗಳ
ಭವಿತನದಲ್ಲಿರಿಸಬಾರದಯ್ಯಾ.
ಮಾತಿನಿಂದಾಗಲಿ ಮನದಿಂದಾಗಲಿ ಭೀತಿಯಿಂದಾಗಲಿ
ಶಿವಭಕ್ತಿಯ ಪೂರೈಸುವುದಯ್ಯಾ.
``ಆತ್ಮೀಯಾನ್ವಿವಿಧಾನ್ ಭೋಗಾಂ ಸ್ತ್ರೀಪುತ್ರಪ್ರಮುಖಾನಪಿ|
ಸ್ವಾತ್ಮನೋsಪಿ ವಿಶೇಷೇಣ ತೇಷಾಂ ಚೈವ ಮಾನಯೇತ್||"
ಎಂಬ ನುಡಿಯ ನೋಡಿದೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನದೇವಾ,
ವಾತುಲದಲ್ಲಿ ಕಲ್ಲಯ್ಯಾ.
Art
Manuscript
Music
Courtesy:
Transliteration
Tā śivabhaktanāgi tanna bandhugaḷa
bhavitanadallirisabāradayyā.
Mātinindāgali manadindāgali bhītiyindāgali
śivabhaktiya pūraisuvudayyā.
Ātmīyānvidhān bhōgāṁ strīputrapramukhānapi|
svātmanōspi viśēṣēṇa tēṣāṁ caiva mānayēt||
emba nuḍiya nōḍide nōḍā,
kapilasid'dhamallikārjunadēva,
vātuladalli kallayya.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ