ವಚನ - 1789     
 
ಜನನವಿಲ್ಲದ ಮೂರ್ತಿ ಮನದ ಮೊನೆಯಲ್ಲಿ ಚರಿಸುತ್ತಿದೆ ನೋಡವ್ವಾ. ಘನಕ್ಕೆ ನಿಲುಕದ ಮೂರ್ತಿ ಅಣುರೇಣುವಿನಲ್ಲಿ ಮನೆಮಾಡಿ ಚರಿಸುತ್ತಿದೆ ನೋಡವ್ವಾ. ತಿಳಿದಿಹೆ ನಾನೆಂದಡೆ ತಿಳಿಯದೆ ದೂರವಾಗಿ ಚರಿಸುತ್ತಿದೆ ನೋಡವ್ವಾ. ಇದರಂದವನರಿದರಿದು ಬೇಸತ್ತು ಬೆಂಬಿದ್ದೆನವ್ವಾ, ಕಪಿಲಸಿದ್ಧಮಲ್ಲಿಕಾರ್ಜುನಂಗೆ.