Index   ವಚನ - 1800    Search  
 
ಅಗ್ನಿಲಿಂಗವ ಬ್ರಾಹ್ಮಣ ಪೂಜಿಸಿದ; [ಧರ್ನುಲಿಂಗ]ವ ಕ್ಷತ್ರಿಯ ಪೂಜಿಸಿದ; [ಧನ] ಲಿಂಗವ ವೈಶ್ಯ ಪೂಜಿಸಿದ; ಖಡ್ಗಲಿಂಗವ ರಾಜ ಪೂಜಿಸಿದ; ಧಾನ್ಯಲಿಂಗವ ಶೂದ್ರ ಪೂಜಿಸಿದ; ಪರ್ವತಲಿಂಗವ ಶೈವ ಪೂಜಿಸಿದ; ಕಪಿಲಸಿದ್ಧಮಲ್ಲಿಕಾರ್ಜುನಲಿಂಗವ ಸಿದ್ಧರಾಮ ಪೂಜಿಸಿದ ನೋಡಾ, ಕೇದಾರ ಗುರುದೇವ.