•  
  •  
  •  
  •  
Index   ವಚನ - 1804    Search  
 
ಶಿವ ಶಿವಾ, ಶಿವ ಶಿವಾ, ಶಿವ ಶಿವಾ ಎಂದೊಮ್ಮೆ ಶಿವನಾಗಿ ಶಿವನ ಪೂಜಿಸು ಮನವೆ. ಹರ ಹರಾ, ಹರ ಹರಾ, ಹರ ಹರಾ ಎಂದೊಮ್ಮೆ ಹರನಾಗಿ ಪುರಹರನ ಪೂಜಿಸು ಮನವೆ. ಲಿಂಗವೇ ಲಿಂಗವೇ [ ಲಿಂಗವೇ] ಎಂದೊಮ್ಮೆ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವ ಪೂಜಿಸಿ ಲಿಂಗವಾಗು ಮನವೆ.
Transliteration Śiva śivā, śiva śivā, śiva śivā endom'me śivanāgi śivana pūjisu manave. Hara harā, hara harā, hara harā endom'me haranāgi puraharana pūjisu manave. Liṅgavē liṅgavē [liṅgavē] endom'me kapilasid'dhamallikārjunaliṅgava pūjisi liṅgavāgu manave.