ವಚನ - 1813     
 
ನಿರಾಕಾರದ ಮೂರ್ತಿಯ ಆಕಾರಕ್ಕೆ ತಂದೆಯಲ್ಲಾ ಬಸವಾ! ಆಕಾರದ ಮೂರ್ತಿಯ ಹೃದಯಕಂಜದಲ್ಲಿ ವಾಸಗೊಂಡು ತೋರಿದೆಯಲ್ಲಾ ಬಸವಾ! ಈ ಆಕಾರಕ್ಕೆ ತಂದು, ಭಕ್ತಿಯನನುಗೈದು, ದಿಗುವಶದಲ್ಲಿ ಬೆಳೆದೆಯಲ್ಲಾ ಬಸವಾ? ಇನ್ನಾಕಾರವ ನಿರಾಕಾರದಲ್ಲಿ ಅನುಗೊಳಿಸಬೇಕೆಂದು, ಕಪಿಲಸಿದ್ಧಮಲ್ಲಿಕಾರ್ಜುನನ ಹೃದಯದಲ್ಲಿ ಮರೆಯಾದೆಯಲ್ಲಾ ಬಸವಾ!