ವಚನ - 1833     
 
ಕುರಿಯ ಹೆಸರು ಒಂದೆ, ಅಗ್ನಿಯ ಹೆಸರು ಒಂದೆ ಆದಲ್ಲಿ, ಅಗ್ನಿಯ ಸಾಮರ್ಥ್ಯ ಕುರಿಗೆ ಬಂದೀತೇನಯ್ಯಾ? ಕಪ್ಪೆಯ ಹೆಸರು ಹಾವಿನ ಹೆಸರು ಒಂದೆ ಆದಲ್ಲಿ, ಹಾವಿನ ಸಾಮರ್ಥ್ಯ ಕಪ್ಪೆಗೆ ಬಂದೀತೇನಯ್ಯಾ? ನನ್ನ ಹೆಸರು, ನಮ್ಮ ಶಿವಶರಣರ ಹೆಸರು ಒಂದೆ ಆದಲ್ಲಿ, ಅವರ ಸಾಮರ್ಥ್ಯ ಎನಗೆ ಬಂದೀತೇನಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.