ವಚನ - 1840     
 
ಒಲಿಯದ ಮೂರ್ತಿ: ಒಲಿಸಿಕೊಟ್ಟ ನಮ್ಮ ಚೆನ್ನಬಸವ. ಉಲಿಯುವ ಮೂರ್ತಿ: ಬಲೆಯ ಹಾಕಿಕೊಟ್ಟ ನಮ್ಮ ಚೆನ್ನಬಸವ. ಕಲಿಯುಗದ ಕಲಿಯಹ ಕಾಲಾಧರಧರ ಗುರುವೈಕ್ಯವನರಿದು, ಇನ್ನರುಹಿನ ಮನೆಯಲ್ಲಿರಲಾರೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನದೇವಾ.