ವಚನ - 1843     
 
ಯೋಗಿಯ ಹೊಲಬು ಯೋಗಿಯಾದವಂಗಲ್ಲದೆ, ಇತರ ನರಂಗೆ ಸಾಧಿಸಬಾರದು ಕೇಳಯ್ಯಾ. ಧಾತುವಾದವದು ರಸವಾದಿಯಾದವಂಗಲ್ಲದೆ, ಇತರ ನರಂಗದು ಸಾಧಿಸಬಾರದು ಕೇಳಯ್ಯಾ. ನೋಡಿ ಮಾಡುವುದಾದಡೆ ಭವವೆಲ್ಲಿಹುದು, ದರಿದ್ರವೆಲ್ಲಿಹುದು ಹೇಳಯ್ಯಾ, ಕಪಿಲಸಿದ್ಧಯ್ಯಾ.