ವಚನ - 1845     
 
ಮೂರು ಗುಂಡಿನ ಒಲೆಯಲ್ಲಿ, ಮಾರಾರಿ ಮೂರುತಿಯ ಪಾಕವ ಮಾಡುತ್ತಾನೆ ನೋಡಾ. ಆ ಪಾಕ ಪಕ್ವವಾಗದು. ಈ ವಿಚಿತ್ರವ ನೋಡಿ ನಿಬ್ಬೆರಗಾದೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.