ವಚನ - 1851     
 
ಮಂಚವೊಂದರಲ್ಲಿ ಕಂಚುಕಿ ಸಹ ಮೂರ್ತವ ಮಾಡಿದ್ದಾನೆ. ಆ ಮೂರ್ತಿಯ ಹಂಚುಹಂಚಿನಲ್ಲಿ ಕಂಚುಕಿಯಾಗಿದ್ದಾನೆ. ಆ ಮಂಚ, ಈ ಹಂಚು ಕಂಚುಕಿಯ[ರ]ರಿಯಬಲ್ಲಡೆ, ಸಂಚಿತತ್ರಯ ಒಡಕ ಹಂಚು ನೋಡಾ, ಪ್ರಪಂಚಹರ ಪಂಚಮುಖ ಕಪಿಲಸಿದ್ಧಮಲ್ಲಿಕಾರ್ಜುನಾ.