•  
  •  
  •  
  •  
Index   ವಚನ - 1853    Search  
 
ಬೀಜವೊಂದರಲ್ಲಿ ಸೋಜಿಗದ ಮೂರುತಿ ಮಾಡುವ ಬುದ್ಧಿಯೊಳೈದಾನೆ ನೋಡವ್ವಾ. ಬೀಜವ ನೋಡಿದಡೆ ತಾನು ಬೀಜ. ಅದರಲ್ಲಿಯ ಸೋಜಿಗನು ತಾನು ಮಾಜುವ ಬುದ್ಧಿ ತಾ ಎನಬಾರದು, ಮಾಯೆ ಎನಬಾರದು. ಇವರೀರ್ವರಲ್ಲಿ ಜೂಜು ಇಟ್ಟು ಚಲಿಸುತ್ತದೆ ನೋಡವ್ವಾ, ಕಪಿಲಸಿದ್ಧಮಲ್ಲಿಕಾರ್ಜುನನೆಂಬೆ ಮಹಾವಸ್ತುವವ್ವಾ.
Transliteration Bījadalli sōjigada mūruti māḍuva bud'dhiyoḷaidāne nōḍavvā. Bījava nōḍidaḍe tānu bīja. Adaralliya sōjiganu tānu mājuva bud'dhi tā enabāradu, māye enabāradu. Ivarīrvaralli jūju iṭṭu calisuttade nōḍavvā, kapilasid'dhamallikārjunanembe mahāvastuvavvā.