•  
  •  
  •  
  •  
Index   ವಚನ - 1855    Search  
 
ಅವಸ್ಥಾತ್ರಯ ಜೀವಂಗಾದ ಬಳಿಕ, ಜೀವವೆಂಬುದು ಪರಮಾತ್ಮ. ಪರಮಾತ್ಮಂಗವಸ್ಥಾತ್ರಯವೆಂದ ಬಳಿಕ, ಜನನಮರಣಕ್ಕೊಳಗಾಯಿತ್ತು. ಜೀವಂಗಲ್ಲ, ಪರಮಾತ್ಮಂಗಲ್ಲ, ಅಂತರಾತ್ಮಂಗಲ್ಲ, ಆಗುವ ಅವಸ್ಥೆ ಮಾಯಾಶಕ್ತಿಗೆ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Avasthātraya jīvaṅgada baḷika, jīvavembudu paramātma. Paramātmaṅgavasthātrayavenda baḷika, jananamaraṇakkoḷagāyitu. Jīvaṅgalla, paramātmaṅgalla, antarātmaṅgalla, āguva avasthe māyāśaktige, kapilasid'dhamallikārjunā.