ಮನದಲ್ಲಿಲ್ಲದ ಮಹಾಂತರು
ಮನದಲ್ಲಿ ಘನಗೊಳಿಸಬಾರದ
ಅಂಗನೆಯರಲ್ಲಿ!
ಮನದಲ್ಲಿಲ್ಲದ ಕಾಯದಲ್ಲಿಲ್ಲದ ಮಹಾಂತರ ಕಂಡಡೆ,
ಎನ್ನ ಮನ ಮನೋಹರವಾಯಿತ್ತಯ್ಯಾ,
ಮಹಾದೇವ ಮದನಮರ್ದನ ಮಹಾಂತ ಮಹಿಮಾಶಾಲಿ
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Manadallillada mahāntaru
manadalli ghanagoḷisabārada
aṅganeyaralli!
Manadallillada kāyadallillada mahāntara kaṇḍaḍe,
enna mana manōharavāyittayyā,
mahādēva madanamardana mahānta mahimāśāli
kapilasid'dhamallikārjunā.