ಯಥಾ ಭಾವಸ್ತಥಾ ದೇವಃ ಎಂದ ಬಳಿಕ,
ದೇವರ ಬಯಲ ಭಾವ ತನ್ನಲ್ಲಿ ಇಂಬುಗೊಂಡಡೆ ಮುಕ್ತಿ.
ದೇವ ರೀತಿಯೊಂದು ತನ್ನ ರೀತಿಯೊಂದಾದ ಬಳಿಕ,
ಘಟಿಸದು ಕಪಿಲಸಿದ್ಧಮಲ್ಲಿಕಾರ್ಜುನನ ಐಕ್ಯವು.
Transliteration Yathā bhāvastathā dēvaḥ' enda baḷika,
dēvara bayala bhāva tannalli imbugoṇḍaḍe mukti.
Dēva rītiyondu tanna rītiyāda baḷika,
ghaṭisadu kapilasid'dhamallikārjunana aikyavu.