ಜನ್ಮವನೊಮ್ಮೆ ಧರಿಸಿದ ಬಳಿಕ,
ಜನನವಿನಾಶ ವಿಗ್ರಹ ಮೂರ್ತಿಯ
ಪೂಜಿಸಲೆ ಬೇಕು.
ಜನ್ಮವನೊಮ್ಮೆ ಧರಿಸಿದ ಬಳಿಕ,
ಶ್ರೀಶೈಲ ಮಹಿಮೆಯ ಸಾಧಿಸಿ
ನೋಡಲೆಬೇಕು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Janmavanom'me dharisida baḷika,
jananavināśa vigraha mūrtiya
pūjisalē bēku.
Janmavanom'me dharisida baḷika,
śrīśaila mahimeya sādhisi
nōḍalēbēku nōḍā,
kapilasid'dhamallikārjunā.