ಎಲ್ಲರು ತಪವ ಮಾಡಿದರು;
ನಮ್ಮ ಶ್ರೀಶೈಲನ ತಪದಂತೆ ತಪದ-ಒರ್ವರನು ಕಾಣೆ.
ಎಲ್ಲರು ಲಿಂಗವ ಪೂಜಿಸಿದರು;
ನಮ್ಮಮ್ಮನವರ ಪೂಜೆಯಂತೆ [ಪೂಜೆಯ] ಒರ್ವರನು ಕಾಣೆ.
ಎಲ್ಲರು ಮಹಿಮೆಯ ಮಾಡಿದರು;
ನಮ್ಮ ಶ್ರೀಶೈಲವಲ್ಲಭ ಕಪಿಲಸಿದ್ಧಮಲ್ಲನಂತೆ
ಒರ್ವರನು ಕಾಣೆ, ಬೊಮ್ಮಣ್ಣಾ.
Transliteration Ellaru tapava māḍidaru;
nam'ma śrīśailana tapadante tapada-orvaranu kāṇe.
Ellaru liṅgava pūjisidaru;
nam'mam'manavara pūjeyante [pūjeya] ōrvaranu kāṇe.
Ellarū mahimeya māḍidaru;
nam'ma śrīśailavallabha kapilasid'dhamallanante
obbaranu kāṇe, bom'maṇṇā.