ಎನ್ನ ರೋಮಂಗಳೆಲ್ಲವು ನಯನಂಗಳಾದಡೆ
ಸಾಲ್ವವು ನೋಡಾ,
ಜಗದಂಬೆಯ ಪಾದಪಂಕಜದರ್ಶನಕ್ಕೆ.
ಎನ್ನ ನಯನಂಗಳೆಲ್ಲ ಜ್ಞಾನಚಕ್ಷುಗಳಾದಡೆ
ಸಾಲ್ವವು ನೋಡಾ,
ಜಗದಂಬೆಯ ಪಾದಪಂಕಜಧ್ಯಾನಕ್ಕೆ.
ಎನ್ನ ಜ್ಞಾನಚಕ್ಷುಗಳೆಲ್ಲ `ಅಖಂಡಾದ್ವಯ
ಏಕೋನೇತ್ರ'ವಾದಡೆ
ಕೂಡುವುದು ನೋಡಾ, ಜಗದಂಬೆಯ
ಪಾದಪಂಕಜದಲ್ಲಿ ಭಾವವು,
ಭವಹರ ಪುರಹರ ಕಪಿಲಸಿದ್ಧಮಲ್ಲೇಂದ್ರಾ.
Art
Manuscript
Music
Courtesy:
Transliteration
Enna rōmaṅgaḷellavu nayanaṅgaḷādaḍe
sālvavu nōḍā,
jagadambeya pādapaṅkajadarśanakke.
Enna nayanaṅgaḷella jñānacakṣugaḷādaḍe
sālvavu nōḍā,
jagadambeya pādapaṅkajadhyānakke.
Enna jñānacakṣugaḷella `akhaṇḍādvaya
ēkōnētra'vādaḍe
kūḍuvudu nōḍā, jagadambeya
pādapaṅkajadalli bhāvavu,
bhavahara purahara kapilasid'dhamallēndrā.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ