•  
  •  
  •  
  •  
Index   ವಚನ - 1900    Search  
 
ಶಿವಾ ಭವಾನೀ ರುದ್ರಾಣೀ ಶಿವೋ ಮಹೇಶ್ವರಃ ಶಂಭುಃ ಎಂಬಲ್ಲಿ ನಮ್ಮಮ್ಮನ ಶಿವನ ನಾಮ ಒಂದೆ ನೋಡಾ. ವಿವೇಕದೃಷ್ಟಿಯಿಂದ ನೋಡಿದಡೆ, ಅದು ಶಿವನ ಶಕ್ತಿಮಂತ್ರವಾಗಿ ಅರಿಯಬಂದಿತ್ತು ನೋಡಾ. `ಓಂ ನಮಃ ಶಿವಾಯ, ನಮಃ ಶಿವಾಯೈ' ಎಂಬ ಭಯ ಮಂತ್ರ ಒಂದೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration ``Śivā bhavānī rudrāṇī śivō mahēśvaraḥ śambhuḥ'' emballi nam'mam'mana śivana nāma onde nōḍā. Vivēkadr̥ṣṭiyinda nōḍidaḍe, adu śivana śaktimantravāgi ariyabandittu nōḍā. `Ōṁ namaḥ śivāya, namaḥ śivāyai' embubhaya mantra onde nōḍā, kapilasid'dhamallikārjunā.