ವಚನ - 1899     
 
ಜೀವಾತ್ಮವೆಂಬುದು ಪಂಚಭೂತಮಯ ದೇಹವನಾಶ್ರಯಿಸಿತ್ತು ನೋಡಾ. ಪರಮಾತ್ಮವೆಂಬುದು ಅಜಾಂಡ ನೂರಾರನೊಳಗುಮಾಡಿ, `ಅತ್ಯತಿಷ್ಠದ್ದಶಾಂಗುಲಂ' ಎನಿಸಿತ್ತು ನೋಡಾ. ಅಂತರಾತ್ಮವೆಂಬುದು ಜೀವಾತ್ಮರನಳಿದು ಪರಮಾತ್ಮನಲ್ಲಿ ಕೂಡುವ ಕೂಟವೆನಿಸಿತ್ತು. ಈ ಆತ್ಮತ್ರಯ ಕಡೆಗೆ ಕಪಿಲಸಿದ್ಧಮಲ್ಲಿಕಾರ್ಜುನನ ರೂಪು ಪ್ರಸಿದ್ಧ ನೋಡಾ, ಕೇದಾರಯ್ಯಾ.