ಕಾಜಿನ ಮಣಿ ಪಚ್ಚದಂದವಿರೆ, ಕಾಜಿನ ಮಣಿಯೆ ಪ್ರಸಿದ್ಧ.
ಲೋಕದ ಮಾನವ ಯೋಗಿಯಂತಿರೆ,
ಲೋಕದ ಮಾನವನೆ ಪ್ರಸಿದ್ಧ.
ಬಾಹ್ಯವರ್ಣ ಜನಪ್ರಸಿದ್ಧವಲ್ಲದೆ,
ಕಪಿಲಸಿದ್ಧಮಲ್ಲಿಕಾರ್ಜುನನ ಚಿತ್ತಕ್ಕೆ ಪ್ರಸಿದ್ಧವಲ್ಲ.
Transliteration Kājina maṇi paccadaṇḍavire, kājina maṇiye prasid'dha.
Lōkada mānava yōgiyantire,
lōkada mānavane prasid'dha.
Bāhyavarṇa janaprasid'dhavallade,
kapilasid'dhamallikārjunana cittakke prasid'dhavalla.