ಆಂದೋಲನದಲ್ಲಿಹ ರಾಜಶಿಶುವಿನಂತಿರಬಲ್ಲಡೆ,
ಅದು ಯೋಗಿಗೆ ಭೂಷಣ.
ಸಂಧ್ಯಾಕಾಲದಲ್ಲಿಹ ಪ್ರಕಾಶದಂತೆ
ವಿಷಯಸುಖವಿರಬಲ್ಲಡೆ,
ಅದು ಯೋಗಿಗೆ ಭೂಷಣ.
ವಾರಾಂಗನೆಯಲ್ಲಿಹ ಪ್ರೀತಿಯಂತಿರಬಲ್ಲಡೆ,
ಅದು ಯೋಗಿಗೆ ಭೂಷಣ.
ಪತಿವ್ರತೆಯಲ್ಲಿಹ ಭಕ್ತಿಯಂತಿರಬಲ್ಲಡೆ
ಅದು ಯೋಗಿಗೆ ಭೂಷಣ.
ಕಪಿಲಸಿದ್ಧಮಲ್ಲಿಕಾರ್ಜುನಂಗದು
ಬಹು ತೋಷಣ ಕೇಳಾ, ಮನವೆ.
Transliteration Āndōlanadalliha rājaśiśuvinantiraballaḍe,
adu yōgige bhūṣaṇa.
Sandhyākāladalliha prakāśadante
viṣayasukhaviraballaḍe,
adu yōgige bhūṣaṇa.
Vārāṅganeyalliha prītiyantiraballaḍe,
adu yōgige bhūṣaṇa.
Pativrateyalliha bhaktiyantiraballaḍe
adu yōgige bhūṣaṇa.
Kapilasid'dhamallikārjunaṅgadu
bahu tōṣaṇa kēḷā, manave.