ಸರ್ವಂ ಖಲ್ವಿದಂ ಬ್ರಹ್ಮ ಎಂಬುದ ಅರಿದ ಬಳಿಕ,
ಲಿಂಗದಲ್ಲಿ ಶಿಲೆಯ ಭಾವವನರಸಲುಂಟೆ?
`ಸರ್ವಂ ಖಲ್ವಿದಂ ಬ್ರಹ್ಮ' ಎಂಬುದ ಅರಿದ ಬಳಿಕ,
ಗುರುವಿನಲ್ಲಿ ನರನ ಭಾವವನರಸಲುಂಟೆ?
`ಸರ್ವಂ ಖಲ್ವಿದಂ ಬ್ರಹ್ಮ' ಎಂಬುದ ಅರಿದ ಬಳಿಕ,
ಮಾಯಾಮಯ ಸಂಸಾರವೆಂದರಸಲುಂಟೆ?
`ಸರ್ವಂ ಖಲ್ವಿದಂ ಬ್ರಹ್ಮ' ಎಂಬುದ ಅರಿದ ಬಳಿಕ,
ನಾನು ಜೀವಿ, ನಾನು ಜಡ, ನಾನು ಬದ್ಧನೆಂದರಸಲುಂಟೆ?
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sarvaṁ khalvidaṁ brahma' embuda arida baḷika,
liṅgadalli śileya bhāvavanarasaluṇṭe?
`Sarvaṁ khalvidaṁ brahma' embuda arida baḷika,
guruvinalli narana bhāvavanarasaluṇṭe?
`Sarvaṁ khalvidaṁ brahma' embuda arida baḷika,
māyāmaya sansāravendarasaluṇṭe?
`Sarvaṁ khalvidaṁ brahma' embuda arida baḷika,
nānu jīvi, nānu jaḍa, nānu bad'dhanendarasaluṇṭe?
Kapilasid'dhamallikārjunā.