ವಚನ - 1936     
 
ಇಲ್ಲದ ಮಾಯೆಯ ಇಲ್ಲೆನಿಸುವುದದೆ ಅಲ್ಲನ ಅರುಹು ಕಂಡಯ್ಯಾ. ಇಲ್ಲದ ಮಾಯೆ ಅಹುದೊ ಅಲ್ಲವೊ ಎಂಬುಭಯ ಭಾವ ಜಲ್ಲರಿಯ ಕಳಂಕು ಕಂಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.