ವಚನ - 1951     
 
ನನ್ನಿಚ್ಛೆ ತನ್ನ ತಂದೀತೆಂದರಿಯೆ; ಆತನಿಚ್ಛೆಯಿಂದ ನಾ ಬಂದೆನೆಂಬುದ ಅರಿಯೆ. ನನ್ನಿಚ್ಛೆಯಾಗಲಿ, ಶಿವನಿಚ್ಛೆಯಾಗಲಿ, ಬಂದುದು ನೀ ನಾನೆಂದೆ. ಇದಕ್ಕೆ ಇನ್ನು ಬರಬಾರದ ಚೆನ್ನ ಮಾರ್ಗ ತೋರಾ, ಚೆನ್ನಬಸವ ಕಪಿಲಸಿದ್ಧಮಲ್ಲಿಕಾರ್ಜುನಾ.